ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: ಕಾಂಗ್ರೆಸ್ ಬೆಂಬಲಿಗ ಸದಸ್ಯರ ಗೈರುಹಾಜರಿ- ತಾಲ್ಲೂಕು ಪಂಚಾಯತ್ ಸಾಮಾನ್ಯ ಸಭೆ ಮುಂದಕ್ಕೆ

ಬಂಟ್ವಾಳ: ಕಾಂಗ್ರೆಸ್ ಬೆಂಬಲಿಗ ಸದಸ್ಯರ ಗೈರುಹಾಜರಿ- ತಾಲ್ಲೂಕು ಪಂಚಾಯತ್ ಸಾಮಾನ್ಯ ಸಭೆ ಮುಂದಕ್ಕೆ

Tue, 02 Feb 2010 18:35:00  Office Staff   S.O. News Service

ಬಂಟ್ವಾಳ, ಫೆಬ್ರವರಿ ೨: ಮಂಗಳವಾರ ಬಿ.ಸಿ.ರೋಡಿನ ಎಸ್.ಜೆ.ಎಸ್.ಆರ್. ವೈ ಸಭಾಂಗಣದಲ್ಲಿ ನಡೆಯಬೇಕಿದ್ದ ಬಂಟ್ವಾಳ ತಾಲೂಕು ಪಂಚಾಯತ್ ಸಾಮಾನ್ಯಸಭೆ ಕಾಂಗ್ರೇಸ್ ಬೆಂಬಲಿತ ತಾ.ಪಂ ಸದಸ್ಯರ ಗೈರು ಹಾಜರಿಯಿಂದಾಗಿ ಮುಂದೂಡಲ್ಪಟ್ಟಿದೆ.

 

ತಾಲೂಕು ಪಂಚಾಯತ್ ಅಧ್ಯಕ್ಷ ಎಂ ಬಾಬು ರವರ ಅಧ್ಯಕ್ಷತೆಯಲ್ಲಿ ಇಂದಿನ ಸಭೆಯನ್ನು ಕರೆಯಲಾಗಿತ್ತು. ಹತ್ತೂವರೆಗೆ ನಿಗದಿಯಾಗಿದ ಸಭೆ, ಕೋರಂ ನ ಕೊರತೆಯಿಂದಾಗಿ ಹನ್ನೊಂದು ಗಂಟೆಗೆ ಮುಂದೂಡಲಾಗಿತ್ತು. ಹನ್ನೊಂದು ಗಂಟೆಗೆ ಸಭಾಂಗಣದಲ್ಲಿ ಸೇರಿದ ತಾ.ಪಂ. ಅಧ್ಯಕ್ಷರು,ಬಿಜೆಪಿ ಬೆಂಬಲಿತ ತಾ.ಪಂ., ಜಿ.ಪಂ. ಸದ್ಯರು ಹನ್ನೊಂದೂವರೆ ತನಕ ಉಳಿದ ಸದಸ್ಯರಿಗಾಗಿ ಕಾದರು. ಆದರೆ ಅವರು ಬಾರದ ಹಿನ್ನೆಲೆಯಲ್ಲಿ, ನಿಗದಿತ ಕೋರಂ.ಇಲ್ಲದಕಾರಣ ಅಧ್ಯಕ್ಷರ ಅನುಮತಿಯಂತೆ ಸಭೆಯನ್ನು ಫೆಬ್ರವರಿ ೧೦ ಕ್ಕೆ ಮುಂದೂಡಲಾಗಿದೆ ಎಂದು ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ವಸಂತ ರಾಜ್ ಶೆಟ್ಟಿ ಪ್ರಕಟಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಜಗನ್ನಾಥ ಸಾಲಿಯಾನ್, ಬಿಜೆಪಿ ಬೆಂಬಲಿತ ಹದಿನಾರು ಸದಸ್ಯರು ಹಾಗೂಕಾಂಗ್ರೇಸ್ ತೊರೆದಿರುವ ಪುರೊಷೋತ್ತಮ ಗಟ್ಟಿ ಸಭೆಗೆ ಹಾಜರಾಗಿದ್ದರು. ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಸಭೆ ಮುಂದೂಡಿದ ಬಳಿಕ ತಾ.ಪಂ. ಆವರಣದಲ್ಲಿ ಕಾಣಿಸಿಕೊಂಡರು.

 

 

ಸಭೆ ಮಾಡಲಿ,ನಿರ್ಣಯಯವನ್ನೂ ಮಾಡಲಿ..

ಇತ್ತ ಸಭೆಗೆ ಸಾಮೂಹಿಕ ಗೈರು ಹಾಜರಾಗುವ ಮೂ;ಲಕ ತಮ್ಮ ”ಒಗ್ಗಟ್ಟು” ಪ್ರದರ್ಶಿಸಿದ ಕಾಂಗ್ರೇಸ್ ಬೆಂಬಲಿತ ತಾ.ಪಂ ಸದಸ್ಯರು, ಅವಿಶ್ವಾಸ ಗೊತ್ತುವಳಿ ಸಭೆಯನ್ನು ನಮ್ಮ ಗೈರು ಹಾಜರಿಯಲ್ಲಿಯೂ ಅಕ್ರಮವಾಗಿ ನಡೆಸಿ ಅಸಿಂಧು .ನಿರ್ಣಯ ಕೈಗೊಂಡಿರುವ ಬಿ.ಜೆ.ಪಿ ಗರು ಇವತ್ತೂ ಸಭೆಯನ್ನು ನಡೆಸಬೇಕಿತ್ತು ಎಂದು ಸವಾಲು ಹಾಕಿದ್ದಾರೆ.

 


Share: